• Home
  • Kannada
  • ಪರಿಚಯ ಪತ್ರ ಸಿದ್ಧಪಡಿಸುವ ಕುರಿತು ಎಂಟು ಹುಚ್ಚಾಟದ ಆದರೆ ಸತ್ಯದಿಂದ ಕೂಡಿರುವ ಅಂಶಗಳು

ಪರಿಚಯ ಪತ್ರ ಸಿದ್ಧಪಡಿಸುವ ಕುರಿತು ಎಂಟು ಹುಚ್ಚಾಟದ ಆದರೆ ಸತ್ಯದಿಂದ ಕೂಡಿರುವ ಅಂಶಗಳು

ಪರಿಚಯ ಪತ್ರ ಸಿದ್ಧಪಡಿಸುವ ಕುರಿತು ಎಂಟು ಹುಚ್ಚಾಟದ ಆದರೆ ಸತ್ಯದಿಂದ ಕೂಡಿರುವ ಅಂಶಗಳು

ನೀವು ನಿಮ್ಮ ಪರಿಚಯ ಪತ್ರವನ್ನು ಧೀರ್ಘಕಾಲ ಪರಿಷ್ಕರಿಸದಿದ್ದರೆ, ನಿಮ್ಮ ಪರಿಚಯ ಪತ್ರವನ್ನು ಸಿದ್ಧಪಡಿಸಲು ಪ್ರಾರಂಭಿಸುವುದು ಕಷ್ಟಕರ ಆಗಬಹುದು. ನೀವು ಯಾವು ಹೊಸ ಪರಿಚಯ ಪತ್ರದ ನಿಯಮಗಳು ಮತ್ತು ಪ್ರವೃತ್ತಿಗಳನ್ನು ಅನುಸರಿಸಬೇಕು? ಮತ್ತು ಗಂಭೀರವಾದ ವಿಷಯವೆಂದರೆ, ಒಂದು ಪುಟವೋ ಅಥವಾ ಎರಡೋ? 

ದಿನಗಳಲ್ಲಿ ವಿಶಿಷ್ಟವಾದ ಪರಿಚಯ ಪತ್ರವನ್ನು ರೂಪಿಸುವುದು ನೇಮಕಾತಿ ವ್ಯವಸ್ಥಾಪಕರ ಗಮನ ಆಕರ್ಷಿಸುವ ಹೆಚ್ಚುವರಿ ಸವಾಲನ್ನೂ ಸಹ ಒಳಗೊಂಡಿದೆ. ಕೆಲವರು ಹೇಳುತ್ತಾರೆ ಹೆಚ್ಚಿನ ಅನುಕೂಲತೆಯನ್ನು ಸಾಧಿಸಲು ನಿಮ್ಮ ಪರಿಚಯ ಪತ್ರವನ್ನು ಪಾಲಿಶ್ ಮಾಡಲು ವೃತ್ತಿಪರರ ನೆರವು ಪಡೆಯುವುದು ಪ್ರಯೋಜನಕಾರಿ. ಕೆಲವರು ಸಲಹೆ ನೀಡುವುದು ಅದನ್ನು ನೀವೇ ವಿನ್ಯಾಸಿಸಿ ಎಂದು. ಏನಾದರೂ, ನಿಮ್ಮ ಪರಿಚಯ ಪತ್ರವನ್ನು ನೀವೇ ವಿನ್ಯಾಸಿಸುವುದು ಒಂದು ಕೌಶಲ್ಯವೇ ಸರಿ. 

ಪರಿಚಯ ಪತ್ರದಲ್ಲಿ ನೀವು ಅಳವಡಿಸಬೇಕಾದ ಒಟ್ಟಾರೆ ಉಪಾಯಗಳನ್ನು ನಾವು ಸಂಗ್ರಹಿಸಿದ್ದೇವೆ. ನೀವು ನಿಮ್ಮನ್ನು ವಿಜೇತರನ್ನಾಗಿಸುವ ಪರಿಚಯ ಪತ್ರ ರೂಪಿಸುವುದನ್ನು ಖಚಿತಪಡಿಸುವ ಸಲಹೆ ಮತ್ತು ತಂತ್ರಗಳನ್ನು ಓದಿರಿ. 

ಸಂಘಟಿಸಿ 

ಸಾಮಾನ್ಯವಾಗಿ, ನೀವು ಎಷ್ಟು ಚೆನ್ನಾಗಿ ಪರಿಚಯ ಪತ್ರ ಬರೆದಿದ್ದರೂ, ಯಾರೂ ಅದನ್ನು ಸಂಪೂರ್ಣವಾಗಿ ಓದುತ್ತಿಲ್ಲ. ನೇಮಕಾತಿ ವ್ಯವಸ್ಥಾಪಕರು ನೂರಾರು, ಕೆಲವೊಮ್ಮೆ ಸಾವಿರಾರು ಪರಿಚಯ ಪತ್ರಗಳನ್ನು ಏಕ ಕಾಲಕ್ಕೆ ಅವಲೋಕಿಸಬೇಕಾಗುತ್ತದೆ. ನಿಮ್ಮ ಪರಿಚಯ ಪತ್ರದ ಪ್ರತಿಯೊಂದೂ ಭಾಗವನ್ನು ಓದುವುದು ಅವರಿಗೆ ಕಾರ್ಯಸಾಧ್ಯ ಆಗುವುದಿಲ್ಲ. 

ನೇಮಕಾತಿ ತಜ್ಞರು ಸಾಮಾನ್ಯವಾಗಿ ನಿಮ್ಮ ಪರಿಚಯ ಪತ್ರವನ್ನು 25 ಸೆಕೆಂಡುಗಳವರೆಗೆ ಸ್ಕ್ಯಾನ್ ಮಾಡುತ್ತಾರೆ. ಆದ್ದರಿಂದ, ಮೂಲತ: ನೀವು ಮೊದಲ ಪ್ರಭಾವ ಬೀರಲು 25 ಸೆಕೆಂಡುಗಳನ್ನು ಹೊಂದಿರುವಿರಿ. ಪರಿಚಯ ಪತ್ರವು ದುರ್ಬಲವಾಗಿ ಸಂಘಟಿತವಾಗಿದ್ದರೆ ಅಥವಾ ಎರಡು ಪುಟಗಳನ್ನು ಮೀರಿದ್ದರೆ ನೇಮಕಾತಿ ವ್ಯವಸ್ಥಾಪಕರಿಗೆ ಅದನ್ನು ಸ್ಕ್ಯಾನ್ ಮಾಡುವುದು ಕಷ್ಟವಾಗುತ್ತದೆ. ಅವರು ತಮಗೆ ಬೇಕಾದ್ದನ್ನು ಸುಲಭವಾಗಿ ನಿಮ್ಮ ಪರಿಚಯ ಪತ್ರದಲ್ಲಿ ಕಾಣದಿದ್ದರೆ, ಅವರು ನಿಮ್ಮನ್ನು ಕೈಬಿಡಬಹುದು. 

ಉದಾಹರಣೆಗಳನ್ನು ಉಲ್ಲೇಖಿಸಿ 

ನಿಮ್ಮ ಪರಿಚಯ ಪತ್ರವನ್ನು ವಿನ್ಯಾಸಿಸಲು ಪ್ರಾರಂಭಿಸುವ ಮುಂಚೆ, ಅಂತಹ ಹುದ್ದೆಯ ವಿವರಣೆಗೆ ಅರ್ಜಿ ಸಲ್ಲಿಸುವ ವ್ಯಕ್ತಿಗಳ ಪರಿಚಯ ಪತ್ರವನ್ನು ಗಮನಿಸಿ. ಅಥವಾ, ವೈವಿಧ್ಯಮಯ ಉದ್ಯೋಗ ಪರಿಸ್ಥಿತಿಗಳಿಗೆ ಹೊಂದುವ ಪರಿಚಯ ಪತ್ರವೊಂದನ್ನು ಸಮೀಕ್ಷಿಸಿ. ಪರಿಷ್ಕರಿಸುವ ಮುಂಚೆ ವಿವಿಧ ಪರಿಚಯ ಪತ್ರಗಳ ಸ್ಯಾಂಪಲ್-ಗಳನ್ನು ಓದಿರಿ. 

ನಂತರ, ನಿಮ್ಮ ಸಾಮರ್ಥ್ಯಗಳು ಮತ್ತು ಸಾಧನೆಗಳನ್ನು ಅತ್ಯುತ್ತಮವಾಗಿ ಎತ್ತಿತೋರಿಸುವ ಶೈಲಿ ಮತ್ತು ಸ್ವರೂಪವೊಂದನ್ನು ಆಯ್ದುಕೊಳ್ಳಿ. ಈ ರೀತಿ ನೀವು ಹೆಚ್ಚು ಸಂದರ್ಶನ ಕರೆಗಳನ್ನು ಆಕರ್ಷಿಸುವಿರಿ ಮತ್ತು ನಿಮ್ಮ ಪರಿಚಯ ಪತ್ರವು ಪರಿಗಣನೆಯಿಂದ ನಿಮ್ಮನ್ನು ಹೊರಹಾಕುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವಿರಿ. 

ಸಾಧನೆಗಳನ್ನು ನಮೂದಿಸಿ, ಉದ್ಯೋಗ ವಿವರಣೆಯನ್ನಲ್ಲ 

ನೇಮಕಾತಿ ವ್ಯವಸ್ಥಾಪಕರು, ವಿಶೇಷವಾಗಿ ಇಂಜಿನಿಯರಿಂಗ್ ಅಂತಹ ತಾಂತ್ರಿಕ ಕ್ಷೇತ್ರಗಳಲ್ಲಿ, ಸಮಸ್ಯೆಗಳನ್ನು ಬಗೆಹರಿಸಲು ಅವರಿಗೆ ನೆರವಾಗುವ ಅಭ್ಯರ್ಥಿಗಳನ್ನು ಎದುರು ನೋಡುತ್ತಾರೆ. ಅವರು ಸಂಸ್ಥೆಯೊಳಗಿನ ಅವಶ್ಯಕತೆಯನ್ನು ತೃಪ್ತಿಪಡಿಸುವ ಅಭ್ಯರ್ಥಿಗಳನ್ನು ಬಯಸುತ್ತಾರೆ. ನೀವು ನಿಮ್ಮ ಹಿಂದಿನ ಸಂಸ್ಥೆಯಲ್ಲಿ ಏನನ್ನು ಸಾಧಿಸಿದ್ದೀರಿ ಎಂಬುದನ್ನು ಪ್ರದರ್ಶಿಸದಿದ್ದರೆ, ನಿಮ್ಮಲ್ಲಿ ಇರುವ ಸಾಮರ್ಥ್ಯ ಅವರಿಗೆ ಹೇಗೆ ತಿಳಿಯುತ್ತದೆ? 

ಪರಿಣಾಮವಾಗಿ, ಇತರ ಸಂಸ್ಥೆಗಳಲ್ಲಿ ಅಂತಹುದೇ ಸಮಸ್ಯೆಗಳನ್ನು ನೀವು ಹೇಗೆ ಬಗೆಹರಿಸಿದಿರಿ ಎಂಬುದನ್ನು ತಿಳಿಸದೆ, ನೀವು ಅವರ ಸಮಸ್ಯೆಗಳಿಗೆ ಪರಿಹಾರ ಆಗಲಾರಿರಿ.  ನೀವು ಆ ಉದ್ಯೋಗದಲ್ಲಿ ಏನು ಸಾಧಿಸಿದಿರಿ ಎಂಬುದರ ಮೇಲೆ ಗಮನ ಕೇಂದ್ರೀಕರಿಸಿ, ಆ ಉದ್ಯೋಗ ಏನಾಗಿತ್ತು ಎಂಬುದರ ಬಗ್ಗೆ ಅಲ್ಲ. ಇವೆರಡರ ನಡುವೆ ಇದೆ ಒಂದು ವ್ಯತ್ಯಾಸ. 

ಟೆಂಪ್ಲೇಟ್ ಒಂದನ್ನು ಬಳಸಿ 

ನೀವು ನಿಮ್ಮ ಮೊದಲ ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಿರುವಿರಾ? ಪರಿಚಯ ಪತ್ರವೊಂದನ್ನು ಹೇಗೆ ವಿನ್ಯಾಸಿಸುವುದು ಎಂಬ ವಿಚಾರ ತಿಳಿದಿಲ್ಲವೆ? ಚಿಂತಿಸಬೇಡಿ. ನೀವು ಅಂತರ್ಜಾಲದಲ್ಲಿ ಹಲವಾರು ಈಮೇಲ್ ಟೆಂಪ್ಲೇಟುಗಳನ್ನು ಪಡೆಯಬಹುದು. ಪರಿಚಯ ಪತ್ರವೊಂದರ ಟೆಂಪ್ಲೇಟ್ ಒಂದನ್ನು ಪ್ರಾರಂಭಿಕ ಹಂತವಾಗಿ ಬಳಸುವುದು ಪೂರ್ವವಿನ್ಯಾಸಿತ ವೇದಿಕೆಯಲ್ಲಿ ಪರಿಚಯ ಪತ್ರವನ್ನು ವ್ಯಕ್ತಿಗತಗೊಳಿಸಲು ಅವಕಾಶ ನೀಡುತ್ತದೆ. 

ನಿಮ್ಮ ಮಾಹಿತಿಯನ್ನು ಪರಿಚಯ ಪತ್ರದ ಟೆಂಪ್ಲೇಟಿಗೆ ಸೇರ್ಪಡೆ ಮಾಡಿ. ಹೆಚ್ಚಿನ ಪ್ರಭಾವ ಬೀರಲು, ನಿಮ್ಮ ಕೌಶಲ್ಯಗಳು ಮತ್ತು ಸಾಮರ್ಥ್ಯಗಳನ್ನು ಎತ್ತಿತೋರಿಸಲು ಕೊಂಚ ತಿರುಚಿ ಬರೆಯಿರಿ. ಇದು ಪರಿಚಯ ಪತ್ರ ರೂಪಿಸುವಲ್ಲಿ ಬಳಸುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. 

ವೃತ್ತಿಜೀವನದ ಸಾರಾಂಶ ಧ್ಯೇಯೋದ್ದೇಶದ ಬದಲು 

ನೆನಪಿಡಿ ಇದು ನಿಮ್ಮ ಪರಿಚಯ ಪತ್ರದ ಮೊದಲ ಸಾಲು. ವೃತ್ತಿಜೀವನದ ಸಾರಾಂಶವನ್ನು ನೀವು ಯಾರು ಮತ್ತು ನೀವು ಏನು ಮಾಡುತ್ತೀರಿ ಎಂಬ ಕುರಿತು ಸಂಕ್ಷಿಪ್ತ ಮಾಹಿತಿ ನೀಡಲು ವಿನ್ಯಾಸಿತವಾಗಿದೆ. 

ನೇಮಕಾತಿ ವ್ಯವಸ್ಥಾಪಕರ ಗಮನವನ್ನು ಪ್ರಾರಂಭದಿಂದಲೇ ನಿಮ್ಮತ್ತ ಸೆಳೆಯಿರಿ. ನೆನಪಿಡಿ, ನಿಮ್ಮ ಬಳಿ ಆ ಮೊದಲ ಪ್ರಭಾವವನ್ನು ಬೀರಲು ಕೇವಲ 25 ಸೆಕೆಂಡುಗಳು ಮಾತ್ರ ಇವೆ. 

ಎಲ್ಲವನ್ನೂ ಅದರಲ್ಲಿ ತುಂಬಬೇಡಿ 

ನೀವು ನಿಮ್ಮ ಉದ್ಯೋಗದ ಎಲ್ಲಾ ಅನುಭವಗಳನ್ನು ನಿಮ್ಮ ಪರಿಚಯ ಪತ್ರದಲ್ಲಿ ತುಂಬಿಸಬೇಕಾಗಿಲ್ಲ. ನಿಮ್ಮ ಪರಿಚಯ ಪತ್ರವು ವಿಸ್ತೃತ ವೃತ್ತಿಜೀವನದ ಪಟ್ಟಿ ಆಗಿರಕೂಡದು. ಆದರೆ, ಅದು ನಿಮ್ಮನ್ನು ಆ ಉದ್ಯೋಗಕ್ಕಾಗಿ ಹೇಳಿಮಾಡಿಸಿದ ವ್ಯಕ್ತಿಯನ್ನಾಗಿ ಮಾರುವ ಮಾರ್ಕೆಟಿಂಗ್ ದಾಖಲೆ ಆಗಿರಬೇಕು. 

ನೀವು ಕಳುಹಿಸುವ ಪ್ರತಿಯೊಂದು ಪರಿಚಯ ಪತ್ರಕ್ಕೂ, ನೀವು ಉದ್ಯೋಗಕ್ಕೆ ಅತ್ಯಂತ ನಿಕಟವಾಗಿ ಸಂಬಂಧಿಸಿರುವ ನಿಮ್ಮ ಸಾಧನೆಗಳು ಮತ್ತು ಕೌಶಲ್ಯಗಳನ್ನು ಎತ್ತಿ ತೋರಿಸಬೇಕು. ಕೌಶಲ್ಯಗಳನ್ನು ಎತ್ತಿ ತೋರಿಸುವುದು ನಿಮ್ಮೆಲ್ಲಾ ಅನುಭವವನ್ನು ಸೇರ್ಪಡೆ ಮಾಡುವುದಕ್ಕಿಂತ ಹೆಚ್ಚು ಆಕರ್ಷಣೀಯ. 

ಸಂಪರ್ಕ ಮಾಹಿತಿಯನ್ನು ಸೇರಿಸಿ 

ನಿಮ್ಮ ಎಲ್ಲಾ ಸಂಪರ್ಕ ಮಾಹಿತಿಯನ್ನು ಸೇರಿಸುವುದು ಸಾಮಾನ್ಯವಾಗಿ ಒಂದು ಒಳ್ಳೆಯ ಅಭ್ಯಾಸ ಆಗಿರುತ್ತದೆ. ನೀವು ಲಿಂಕ್ಡ್ ಇನ್ ತಾಣದಲ್ಲಿ ಇಲ್ಲದಿದ್ದರೆ, ಇಂದೇ ಒಂದು ಅಕೌಂಟ್ ಸೃಷ್ಟಿಸಿ. ನಿಮ್ಮ ಎಲ್ಲಾ ಸಂಪರ್ಕ ಮಾಹಿತಿಯನ್ನು ಸೇರ್ಪಡೆ ಮಾಡಿ, ಇದರಿಂದ ಉದ್ಯೋಗದಾತರು ನಿಮ್ಮೊಡನೆ ಸಲಭವಾಗಿ ಸಂಪರ್ಕ ಹೊಂದಬಹುದು. ಸಂಪರ್ಕ ಮಾಹಿತಿಯು ಪರಿಚಯ ಪತ್ರ ಸಿದ್ಧಪಡಿಸುವ ಕಾರ್ಯದಲ್ಲಿ ಕೇಕ್ ಮೇಲೆ ಚೆರ್ರಿಯಂತೆ ಕೆಲಸ ಮಾಡುತ್ತದೆ. 

ನಿಮ್ಮ ಪೂರ್ಣ ಹೆಸರು, ಬೀದಿ ವಿಳಾಸ, ನಗರ, ರಾಜ್ಯ, ಪಿನ್ ಕೋಡ್, ದೂರವಾಣಿ ಸಂಖ್ಯೆ, ಮತ್ತು ಈಮೇಲ್ ವಿಳಾಸ ನೀಡಿರಿ. ಲಿಂಕ್ಡ್ ಇನ್ ಪ್ರೊಫೈಲ್ ಅಥವಾ ವೃತ್ತಿಪರ ವೆಬ್ ಸೈಟ್ ಸಂಪರ್ಕವನ್ನೂ ಸಹ ಸೇರಿಸಿ. 

ನೆಟ್ ವರ್ಕ್,  ನೆಟ್ ವರ್ಕ್,  ನೆಟ್ ವರ್ಕ್ 

ಉದ್ಯೋಗದಲ್ಲಿ ಇಲ್ಲದ ವ್ಯಕ್ತಿಗಳಿಗೆ, ಪರಿಚಯ ಪತ್ರ ನೀಡುವುದು ಪೂರ್ಣವೇಳೆಯ ಕೆಲಸ ಆಗಿರಬೇಕು. ಬಹುತೇಕ ಹಿರಿಯ ಮಟ್ಟದ ಸ್ಥಾನಗಳನ್ನು ನೆಟ್ ವರ್ಕಿಂಗ್ ಮೂಲಕ ಭರ್ತಿ ಮಾಡಲಾಗುತ್ತದೆ. ಆದ್ದರಿಂದ, ನಿಮ್ಮನ್ನು ನೇಮಕ ಮಾಡಿಕೊಳ್ಳಬಹುದಾದ ನೇಮಕಾತಿ ತಜ್ಞರ ಜೊತೆಗೆ, ನಿಮಗೆ ಗೊತ್ತಿರುವ ಬಹುತೇಕ ಎಲ್ಲರನ್ನೂ ಸಂಪರ್ಕಿಸಿ. 

ನೆಟ್ ವರ್ಕಿಂಗ್ ಇವುಗಳನ್ನು ಒಳಗೊಂಡಿರಬಹುದು – ವೈಯಕ್ತಿಕ ವಹಿವಾಟು ಸಂಪರ್ಕಗಳು, ನೀವು ಕೆಲಸ ಮಾಡಿರಬಹುದಾದ ಜನರು ಅಥವಾ ನಿಮಗಾಗಿ ಕೆಲಸ ಮಾಡಿರುವ ಜನರು. 

ಸುಭದ್ರ ಪರಿಚಯ ಪತ್ರವು ನಿಮ್ಮ ಕೈಯಲ್ಲಿ ಇರುವಾಗ, ಅದನ್ನು ಸಮೀಪದಿಂದ ವೀಕ್ಷಿಸುವ ಮತ್ತು ಸಂದರ್ಶನದ ಅವಕಾಶ ಪಡೆಯುವ ಅವಕಾಶಗಳನ್ನು ಹೆಚ್ಚಿಸಿಕೊಳ್ಳುವಿರಿ. ದಿನವೊಂದರಲ್ಲಿ ಒಂದಿಷ್ಟು ಸಮಯವನ್ನು ವಿನಿಯೋಗಿಸಿ ಮತ್ತು ಎಂದೂ ತಿರಸ್ಕೃತವಾಗುವ ಸಂಭವವನ್ನು ತಳ್ಳಿಹಾಕುವಂತೆ ಉತ್ತಮ ಪರಿಚಯ ಪತ್ರವನ್ನು ಸಿದ್ದಪಡಿಸಿ. ನಿಮ್ಮ ಪರಿಚಯ ಪತ್ರವು ಪರಿಷ್ಕಾರಗೊಂಡಾಗ, ನಿಮ್ಮೆದುರು ಬರುವ ಪ್ರತಿಯೊಂದು ಅವಕಾಶವನ್ನೂ ನೀವು ಬಾಚಿಕೊಳ್ಳಲು ಸಿದ್ಧರಿರುವಿರಿ. ನೀವು ಉದ್ಯೋಗವನ್ನು ಹುಡುಕುತ್ತಿಲ್ಲವಾದರೂ, ನಿಮ್ಮ ದಾಖಲೆಯನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡಿರುವುದರಲ್ಲಿ ತಪ್ಪೇನೂ ಇಲ್ಲ. 

EZJobs ಆಪ್ ಉಚಿತವಾಗಿ ಬಳಸಬಹುದಾದ ಉದ್ಯೋಗಗಳ ವೇದಿಕೆಯಾಗಿದ್ದು ಇದು ಉದ್ಯೋಗದಾತರು ಮತ್ತು ಅಭರ್ಥಿಗಳನ್ನು ಸ್ಥಳೀಯ, ಬಿಡುವಿನ ವೇಳೆಯ ಮತ್ತು ಋತುವಿನ ಉದ್ಯೋಗಗಳಿಗಾಗಿ ಸಂಪರ್ಕಿಸುತ್ತದೆ. ನೀವು EZJobs ಆಪ್ ಅನ್ನು ಇಂದೇ ಡೌನ್ ಲೋಡ್ ಮಾಡಿಕೊಳ್ಳಬಹುದು ಮತ್ತು ನಿಮ್ಮ ಸುತ್ತಮುತ್ತ ಉದ್ಯೋಗಗಳನ್ನು ತಕ್ಷಣವೇ ಕಾಣಬಹುದು. 

Leave A Comment

Your email address will not be published. Required fields are marked *